ನಾನು ಕನಕಪುರದ ಬಂಡೆ, ಡಿಕ್ಕಿ ಹೊಡೆದರೆ ಹೋಳಾಗುವುದು ನಿಮ್ಮ ತಲೆ ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಎರಡು ದಿನದ ಹಿಂದೆ ಮಾಧ್ಯಮದವರಿಗೆ ಎಚ್ಚರಿಕೆ ನೀಡಿದ್ದರು. ಮಾಧ್ಯಮಗಳಲ್ಲಿ ತನ್ನ ಮನೆಯ ಮೇಲೆ ನಡೆಯುತ್ತಿರುವ ಐಟಿ ದಾಳಿಯ ವರದಿ ಬಗ್ಗೆ ಡಿಕೆಶಿ ಕೆಂಡಾಮಂಡಲವಾಗಿ, ಈ ಹೇಳಿಕೆ ನೀಡಿದ್ದರು. ರಾಜ್ಯದ ಪ್ರಭಾವಿ ರಾಜಕಾರಣಿಯಾಗಿರುವ ಡಿ ಕೆ ಶಿವಕುಮಾರ್ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ, ಮುಖ್ಯಮಂತ್ರಿಗಳು ಗಂಭೀರ ಹೇಳಿಕೆ ನೀಡಿರುವುದರಿಂದ, ಡಿಕೆಶಿ ಐಟಿದಾಳಿ ವಿಷಯ ಮತ್ತೆ ಚರ್ಚೆಯ ವಸ್ತುವಾಗಿದೆ.ಆದಾಯ ತೆರಿಗೆ ದಾಳಿ ನಡೆಸಲು ಬಂದ ಅಧಿಕಾರಿಗಳೇ, ಡಿ ಕೆ ಶಿವಕುಮಾರ್ ಅವರನ್ನು ಬಿಜೆಪಿ ಸೇರುವಂತೆ ಒತ್ತಾಯಿಸುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಸತತವಾಗಿ ಡಿಕೆಶಿ ಮನೆ, ಆಪ್ತರು ಮತ್ತು ಈಗಲ್ಟನ್ ರೆಸಾರ್ಟ್ ಮೇಲೆ ದಾಳಿ ನಡೆದ ಸಂದರ್ಭದಲ್ಲೂ, ಬಿಜೆಪಿ ಸೇರಲು ಡಿ ಕೆ ಶಿವಕುಮಾರ್ ಅವರಿಗೆ ಒತ್ತಡ ಹೇರಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿತ್ತು.
IT raid on Karnataka Power Minister D K Shivakumar house and properties: Instead of searching the documents, IT officials forcing D K Shivakumar to join BJP, CM Siddaramaiah statement.